ಅರ್ಚಕ ವೆಂಕಟೇಶ' - ಇವರು ಪತ್ರಿಕಾವ್ಯವಸಾಯನಿರತರು ಮತ್ತು ಕನ್ನಡ ಸಾಹಿತಿಗಳು. == ಬದುಕು == ೧೯೧೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರ ತಾಯಿ ರಾಧಾಬಾಯಿ ; ತಂದೆ ಗೋಪಾಲಕೃಷ್ಣಾಚಾರ್ಯ. ಕೆಲಕಾಲ ಎಚ್.ಎ.ಎಲ್.ದಲ್ಲಿ ಉದ್ಯೋಗ ಕೈಕೊಂಡ ವೆಂಕಟೇಶರವರು, ಆ ಬಳಿಕ ಸಿದ್ಧವ್ವನಹಳ್ಳಿ ಕೃಷ್ಣಶರ್ಮರ ‘ವಿಶ್ವ ಕರ್ನಾಟಕ’ ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿ ಸೇರಿದರು. ಕೊನೆಯ ಎರಡು ವರ್ಷ ಆ ಪತ್ರಿಕೆಯ ಸಂಪಾದಕರೂ ಆಗಿದ್ದರು. ‘ವಿಶ್ವ ಕರ್ನಾಟಕ’ ಮುಚ್ಚಿದ ಬಳಿಕ ಸಂಯುಕ್ತ ಕರ್ನಾಟಕ ಪತ್ರಿಕೆಯ ಬೆಂಗಳೂರು ಆವೃತ್ತಿಯಲ್ಲಿ ಸೇವೆಗೈದು ನಿವೃತ್ತಿ ಹೊಂದಿದರು. == ಸಾಹಿತ್ಯ == ಅರ್ಚಕ ವೆಂಕಟೇಶ ಇವರು ಬಹುಮುಖ ಪ್ರತಿಭೆಯ ಸಾಹಿತಿಗಳೂ ಆಗಿದ್ದರು. ಇವರ ಕೆಲವು ಕೃತಿಗಳು ಇಂತಿವೆ: === ಕವನ ಸಂಕಲನ === ಪೂರ್ಣಚಂದ್ರ ಶಬ್ದ ಶಿಲ್ಪ ಶಿಲಾಪಕ್ಷ === ಕಥಾಸಂಕಲನ === ಧ್ರುವ ನಕ್ಷತ್ರ ಜೀವನ ಸಂಗ್ರಾಮ === ನಾಟಕ === ಪಂಗನಾಮ ಬ್ಲ್ಯಾಕ್ ಮಾರ್ಕೆಟ್ ವೀರ ಸಾದಿಕ್ === ಕಾದಂಬರಿ === ಅಸ್ಥಿಪಂಜರ ಚಲೋ ದಿಲ್ಲಿ ರವಿಶಂಕರ == ಬಾಲ ಸಾಹಿತ್ಯ == === ನಾಟಕ === ಜಯವಿಜಯ ಪಾನಕ ಕೋಸಂಬರಿ ಪ್ರಹ್ಲಾದನ ಪಾಣಿಪತ್ತು ಭ್ರಾತೃ ಪ್ರೇಮ ಸಾವನದುರ್ಗ ಹರಿದ ಚಂದ್ರ === ಜೀವನ ಚರಿತ್ರೆ === ಸ್ವಾಮಿ ವಿವೇಕಾನಂದ ಸುಭಾಷಚಂದ್ರ ಬೋಸ್ ಮದನಮೋಹನ ಮಾಳವೀಯ ರಮಣ ಮಹರ್ಷಿ ರಾಮನ ಕತೆ == ಆಂಗ್ಲ ಕೃತಿಗಳು == ಅರ್ಚಕ ವೆಂಕಟೇಶರವರು ೧೯೭೭ರಲ್ಲಿ ನಿಧನರಾದರು. == ಇವುಗಳನ್ನೂ ನೋಡಿ == ಹೆಚ್.ಆರ್.ನಾಗೇಶರಾವ್ ಸಂಯುಕ್ತ ಕರ್ನಾಟಕ ರಂಗನಾಥ ದಿವಾಕರ